ನಲವತ್ತು
ವಯಸ್ಸಿನ ವರೆಗೂ ಸರಾಸರಿ ಮನುಷ್ಯರಲ್ಲಿ ಒಬ್ಬರಾಗಿದ್ದ ಪ್ರವಾದಿ ಮೊಹಮ್ಮದ್ (ಸಲ್) ರವರು ತಮ್ಮ
ನಲವತ್ತನೆಯ ವಯಸ್ಸಿನಲ್ಲಿ ತಮ್ಮನ್ನು ಏಕೈಕ ಒಡೆಯನ ಪ್ರವಾದಿಯಾಗಿರುವೆ ಎಂದು ಪ್ರಕಟಣೆ ಮಾಡಿದರು.
"ಅಖಿಲ ಲೋಕವನ್ನು ಸೃಷ್ಟಿಸಿದವನು
ಒಂದೇ ಒಡೆಯನೆ; ಆ ಒಂದು ಒಡೆಯನನ್ನು ಹೊರತು ಯಾರನ್ನು, ಯಾವುದನ್ನು
ಆರಾಧಿಸ ಬಾರದು ಎಂಬುದೇ ಏಕೈಕ ಒಡೆಯನಿಂದ ತಮಗೆ ಬಂದಿರುವ ಮುಖ್ಯವಾದ ಸಂದೇಶ" ಎಂದರು.
"ಕೊಲೆ, ದರೋಡೆ, ಬಡ್ಡಿ, ಜೂಜಾಟ, ವ್ಯಭಿಚಾರ, ಮಾದಕ
ವಸ್ತುಗಳು, ಸುಳ್ಳು,
ಮೋಸಗಾರಿಕೆ, ಏಮಾರಿಸುವುದು ಮುಂತಾದ ಎಲ್ಲಾ ಕೆಡಕುಗಳಿಂದಲೂ
ಮನುಷ್ಯರು ದೂರವಿರ ಬೇಕು" ಎಂಬ ಸಂದೇಶವು ಏಕೈಕ ಒಡೆಯನಿಂದ ತಮಗೆ ಬರುವುದಾಗಿ ಹೇಳಿದರು.
ಕಾಬಾ
ಎನ್ನುವ ಆಲಯದಲ್ಲೂ, ಅದರ ಸುತ್ತಲೂ 360 ವಿಗ್ರಹಗಳನ್ನು ಸ್ಥಾಪಿಸಿ ದಿನಕ್ಕೊಂದು ವಿಗ್ರಹಕ್ಕೆ
ಆರಾಧನೆ ನಡೆಸಿದ ಸಮುದಾಯದಲ್ಲಿ "ಒಂದೇ ಒಂದು ಒಡೆಯನನ್ನು ಮಾತ್ರವೇ ಆರಾಧಿಸ ಬೇಕು; ಉಳಿದವು
ದೈವಗಳಲ್ಲ" ಎಂದು ಹೇಳಿದರೆ ಯಾವ ಪರಿಣಾಮಗಳು ಏರ್ಪಡುವುದು ಎಂಬುದನ್ನು ಚರಿತ್ರೆಯನ್ನು
ಓದದವರು ಕೂಡ ಊಹಿಸ ಬಹುದು.
ಸತ್ಯವಂತ, ನಂಬಿಕೆಗೆ
ಪಾತ್ರರು ಎಂದೆಲ್ಲಾ ಪ್ರವಾದಿ ಮೊಹಮ್ಮದ್ (ಸಲ್) ರವರನ್ನು ಹೊಗಳಿದ ಜನರು ಈ ತತ್ವ ಸಿಧ್ಧಾಂತ
ಪ್ರಕಟಣೆಯ ನಂತರ ಕಟು ವೈರಿಗಳಾಗಿ ಬಿಟ್ಟರು. ಹುಚ್ಚ ಎಂಬ ಪಟ್ಟ ನೀಡಿದರು. ಅವರನ್ನು, ಅವರ
ತತ್ವ ಸಿಧ್ಧಾಂತವನ್ನು ಸ್ವೀಕರಿಸಿದ ಬೆರಳೆಣಿಕೆಯ ಕೆಲವರನ್ನು ಹೇಳಲಾಗದಷ್ಟು
ಕಷ್ಟಗಳಿಗೊಳಪಡಿಸಿದರು.
ಪ್ರವಾದಿ
ಮೊಹಮ್ಮದ್ (ಸಲ್) ಅವರನ್ನು ಮೊಟ್ಟ ಮೊದಲಿಗೆ ವಿರೋಧಿಸಿದವರು, ಕಟುವಾಗಿ
ವಿರೋಧಿಸಿದವರು ಅವರ ಕುಟುಂಬದವರೇ ಆಗಿದ್ದರು ಎಂಬುದು ಇಲ್ಲಿ ಉಲ್ಲೇಖನೀಯ.
"ತಮ್ಮ ಕುಲವನ್ನು ಸೇರಿದ ಒಬ್ಬರೇ
"ಎಲ್ಲರೂ ಸಮ" ಎಂದು ಪ್ರಚಾರ ಮಾಡುತ್ತಿದ್ದಾರೆ! ಕೀಳು ಜಾತಿಯವರನ್ನು, ದುರ್ಬಲರನ್ನು, ಕರಿಯರನ್ನು, ಗುಲಾಮರನ್ನು
ಮೇಲು ಜಾತಿಗೆ ಸಮ ಎನ್ನುತ್ತಿದ್ದಾರೆ! ತಮಗೆ ಸರಿ ಸಮಾನರಾಗಿ ಅವರನ್ನು ಗೌರವಿಸಿ
ಕುಲಹಿರಿಮೆಯನ್ನು ಕೆಡಿಸುತ್ತಿದ್ದಾರೆ" ಎಂಬ ಕಡುಗೋಪದಿಂದ ತಮ್ಮನ್ನು ಬಹಳ ಮೇಲು ಕುಲ ಎಂದು
ನಂಬಿದ್ದ ಪ್ರವಾದಿ ವರ್ಯರ ಕುಲದವರು ಕಟುವಾಗಿ ಪ್ರವಾದಿ ವರ್ಯರನ್ನು ವಿರೋಧಿಸಿದರು.
ಪ್ರವಾದಿ
ಮೊಹಮ್ಮದ್ (ಸಲ್) ರವರು ತಮ್ಮ ಪ್ರಚಾರವನ್ನು ರಹಸ್ಯವಾಗಿ ನಡೆಸುವ ಸ್ಥಿತಿಗೆ ನೂಕಲ್ಪಟ್ಟರು.
ಪ್ರವಾದಿ
ಮೊಹಮ್ಮದ್ (ಸಲ್) ರವರ ನೀತಿ ತತ್ವದೆಡೆ ಆಕರ್ಷಿಸಲ್ಪಟ್ಟ ಅಮಾಯಕರನ್ನು, ಕೇಳಲು
ಗತಿಯಿಲ್ಲದ ನಿರ್ಗತಿಕರನ್ನು ಕೊಂದು ಗುಡ್ಡೆ ಹಾಕಿದರು. ಬಾಲಕರನ್ನು ಛೂ ಬಿಟ್ಟು ಕಲ್ಲಿನಿಂದ
ಹೊಡೆಯುವಂತೆ ಮಾಡಿದರು.
ಒಂದು
ಹಂತದಲ್ಲಿ ಊರಿಂದಾಚೆಗಿನ ಕಣಿವೆಗೆ ಪ್ರವಾದಿ ವರ್ಯರನ್ನು, ಅವರ ಮಿತ್ರರನ್ನು ಹೊಡೆದಟ್ಟಿ
ಸಾಮೂಹಿಕ ಬಹಿಷ್ಕಾರವನ್ನು ಮಾಡಿದರು. ಹಲವು ದಿನಗಳು ಎಲೆಗಳನ್ನು, ಒಣಗಿದ
ತರಗೆಲೆಗಳನ್ನು ಮಾತ್ರವೇ ಆಹಾರವನ್ನಾಗಿ ಸೇವಿಸುವ ಸ್ಥಿತಿಗೆ ಅವರು ತಳ್ಳಲ್ಪಟ್ಟರು.
"ಪ್ರವಾದಿ ವರ್ಯರೊಡನೆ ಯಾರು
ಮಾತನಾಡ ಬಾರದು; ಅವರೊಂದಿಗೆ ಯಾರು ಯಾವ ಸಂಬಂಧವೂ ಇಟ್ಟು ಕೊಳ್ಳ ಬಾರದು"
ಎಂದೆಲ್ಲಾ ಊರಲ್ಲಿ ನಿಯಂತ್ರಿಸಿದ್ದರು.
ಪ್ರವಾದಿ
ವರ್ಯರ ಮಿತ್ರರು ಒಂದು ಹಂತದಲ್ಲಿ ಊರನ್ನು ಬಿಟ್ಟೆ ಓಡಿ ಹೋಗುವ ಸ್ಥಿತಿಗೆ ತುತ್ತಾದರು.ಪ್ರವಾದಿ
ವರ್ಯರ ಅನುಮತಿಯೊಂದಿಗೆ ಕೆಲವರು ಅಬಿಸೀನಿಯಾಕ್ಕೂ, ಇನ್ನು ಕೆಲವರು ಮದೀನ ಎನ್ನುವ ನಗರಕ್ಕೂ ವಲಸೆ ಹೋದರು.
ಇಷ್ಟೊಂದು
ದಬ್ಬಾಳಿಕೆಗಳನ್ನೂ ಮೀರಿ ಪ್ರವಾದಿ ವರ್ಯರ ತತ್ವ ಬೆಳೆಯುತ್ತಲೇ ಇತ್ತು.
ಕೊನೆಗೆ
"ಇವರನ್ನು ಪ್ರಾಣ ಸಮೇತ ಬಿಟ್ಟರೆ ಊರನ್ನೇ ಕೆಡಿಸಿ ಬಿಡುವರು; ಆದ್ದರಿಂದ
ಕೊಲೆ ಮಾಡಿ ಬಿಡುವೆವು" ಎಂದು ಯೋಜಿಸಿದರು.
ಈ
ಸುದ್ದಿಯನ್ನು ಅರಿತ ಪ್ರವಾದಿ ಮೊಹಮ್ಮದ್ (ಸಲ್) ರವರು ತಮ್ಮ ಸ್ವತ್ತು, ಸುಖ, ಮನೆಮಠ
ಎಲ್ಲವನ್ನೂ ಹಾಗೆಯೇ ಬಿಟ್ಟು ಸುಲಭವಾಗಿ ತೆಗೆದು ಕೊಂಡು ಹೋಗ ಬಹುದಾದ ಚಿನ್ನದ ನಾಣ್ಯಗಳನ್ನು
ಮಾತ್ರವೇ ತೆಗೆದು ಕೊಂಡು ತಮ್ಮ ಮಿತ್ರ ಅಬು ಬಕ್ಕರೊಂದಿಗೆ ಮದೀನ ಎನ್ನುವ ನಗರವನ್ನು ದಿಟ್ಟಿಸಿ
ತ್ಯಾಗ ಪ್ರಯಾಣ ಕೈಗೊಂಡರು.
ನಲವತ್ತನೆಯ
ವಯಸ್ಸಿನಲ್ಲಿ ಆರಂಭಿಸಿದ ಮಕ್ಕಾ ಜೀವನ ಪ್ರವಾದಿ ಮೊಹಮ್ಮದ್ (ಸಲ್) ರವರ 53 ನೆಯ
ವಯಸ್ಸಿನ ವರೆಗೂ ನಡೆದಿತ್ತು.
No comments:
Post a Comment