ಅಲ್ಲಾಹನ
ಹೆಸರಿನಿಂದ
ಚಿಂತಕರು,
ಸುಧಾರಕರು, ಆಡಳಿತದ ನಾಯಕರು, ಉಪಯುಕ್ತ ಹಲವು ಅವತರಣಿಕೆಗಳನ್ನು
ಲೋಕಕ್ಕೆ ನೀಡಿದವರು, ಮಹಾನ್ ಕ್ರಾಂತಿಯನ್ನು ಏರ್ಪಡಿಸಿದವರು, ಮಹಾನ್
ವೀರರು, ಉದಾರ ಮನಸ್ಸಿನ ದಾನಿಗಳು, ಪಂಡಿತರು ಮತ್ತು ಧರ್ಮ ಸಂಸ್ಥಾಪಕರು ಎಂದು
ಸಾವಿರಗಟ್ಟಲೆ ಸಾಧಕರು ಭೂಮಿಯಲ್ಲಿ ಜನಿಸಿ ಮರಣ ಹೊಂದಿರುವರು.
ಇಂತಹ ಸಾಧಕರರಿಂದ ಮುಖ್ಯವಾದ ಜಾಗವನ್ನು ಪಡೆದ ನೂರು ಸಾಧಕರನ್ನು ಆಯ್ಕೆ
ಮಾಡಿ "ದಿ ಹಂಡ್ರೆಡ್" (The
Hundred) ಎಂಬ ಪುಸ್ತಕವನ್ನು ಮೈಕ್ಹೆಲ್ ಹಾರ್ಟ್ (Michel Heart) ಎಂಬ ಇತಿಹಾಸದ ಸಂಶೋಧನಾಕಾರ ಬರೆದ.
ಮಾನವ
ಕುಲದಲ್ಲಿ ಬಹುದೊಡ್ಡ ಪ್ರಭಾವ ಬೀರಿದವರನ್ನು ಅವರು ಕ್ರಮ ಪಡಿಸುವಾಗ ಪ್ರವಾದಿ ಮೊಹಮ್ಮದ್ (ಸಲ್)
ಅವರಿಗೆ ಮೊದಲ ಸ್ಥಾನ ನೀಡಿದರು. ಮೊದಲ ಸಾಧಕರಾಗಿ ಪ್ರವಾದಿ ಮೊಹಮ್ಮದ್ (ಸಲ್) ಅವರನ್ನು ಈ
ಪುಸ್ತಕದಲ್ಲಿ ಅವರು ಸೂಚಿಸಿರುವರು.
ಮೈಕ್ಹೆಲ್
ಹಾರ್ಟ್ ಕ್ರೈಸ್ತ ಧರ್ಮದಲ್ಲಿ ಗಾಢ ವಿಶ್ವಾಸಿಯಾಗಿದ್ದರೂ ಸಹ "ಜನರಲ್ಲಿ ಬಹುದೊಡ್ಡ ಪ್ರಭಾವ
ಬೀರಿದವರು ಎಂದರೆ ಮೊದಲ ಸ್ಥಾನ ಪ್ರವಾದಿ ವರ್ಯರಿಗೆ ಮಾತ್ರ" ಎಂದು ನುಡಿದಿರುವರು.
ಇತಿಹಾಸದ
ನಾಯಕರ ಬಗ್ಗೆ ತಟಸ್ಥ ಮನೋಸ್ಥಿತಿಯಲ್ಲಿ, ಏರುಪೇರಿಲ್ಲದೆ ಯಾರೇ ಸಂಶೋಧನೆ ಮಾಡಿದರೂ, ಯಾವ
ಕೋನದಲ್ಲಿ ಸಂಶೋಧನೆ ಮಾಡಿದರೂ ಅವರಿಂದ ಪ್ರವಾದಿ ವರ್ಯರಿಗೆ ಮಾತ್ರವೇ ಮೊದಲ ಸ್ಥಾನವನ್ನು ನೀಡ
ಬಹುದು.
ಹದಿನಾಲ್ಕು
ಶತಮಾನಗಳ ಮುಂಚೆ ಬಾಳಿ ಮರಣಿಸಿದ ಒಂದು ಮನುಷ್ಯ ಅಂದು ನುಡಿದ, ಕಾರ್ಯರೂಪಕ್ಕೆ ತಂದ ಎಲ್ಲವನ್ನೂ
ಹಾಗೆಯೇ ಹಿಂಬಾಲಿಸುವ ಒಂದು ಸಮುದಾಯ ಲೋಕದಲ್ಲಿದೆ ಎಂದರೆ ಅದು ಪ್ರವಾದಿ ಮೊಹಮ್ಮದ್ (ಸಲ್) ರವರ
ಸಮುದಾಯ ಮಾತ್ರವೇ.
ಪ್ರಾರ್ಥನಾ
ಕ್ರಮಗಳು ಮಾತ್ರವಲ್ಲದೆ ವ್ಯಾಪಾರ ವ್ಯವಹಾರ, ಕುಟುಂಬಿಕ ಜೀವನ, ವೈಯುಕ್ತಿಕ ಜೀವನ ಎಂದು ಯಾವ
ಸಮಸ್ಯೆಯಾಗಿದ್ದರೂ ಪ್ರವಾದಿ ಮೊಹಮ್ಮದ್ (ಸಲ್) ಅವರು ಆದೇಶಿಸಿದ ಹಾಗೆ ನಡೆಯ ಬಲ್ಲ ಸಮುದಾಯ
ಹದಿನಾಲ್ಕು ಶತಮಾನಗಳಿಂದ ಲೋಕದಲ್ಲಿ ಇದ್ದು ಬಂದಿದೆ.
"ಎಲ್ಲಾ ಸಮಸ್ಯೆಗಳಿಗೂ ಪ್ರವಾದಿ
ಮೊಹಮ್ಮದ್ (ಸಲ್) ರವರೆ ಮಾರ್ಗ ದರ್ಶಿ" ಎಂದು ಲೋಕದ ಕಾಲು ಭಾಗಕ್ಕೂ ಹೆಚ್ಹಿನ ಜನರು
ನಂಬಿರುವರು. ಇಂತಹವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಹುತ್ತಲೇ ಸಾಗುವ ದೃಶ್ಯವನ್ನು ಲೋಕ
ಕಾಣುತ್ತಿದೆ.
ಲೋಕದಲ್ಲಿ
ಯಾವ ನಾಯಕನಿಗೂ ಇಂತಹ ವಿಶಿಷ್ಟ ಅರ್ಹತೆ ಸಿಕ್ಕಿಲ್ಲ ಎಂಬುದನ್ನು ಯಾರಾಗಿದ್ದರೂ ಒಪ್ಪಿ ಕೊಳ್ಳಲೇ
ಬೇಕು.
ಹೆಂಡತಿ,ಮಕ್ಕಳು,ಹೆತ್ತವರು,ನೆಂಟರಿಷ್ಟರು
ಮತ್ತು ಎಲ್ಲರಿಗಿಂತ, ಏಕೆ ತಮ್ಮ ಪ್ರಾಣಕ್ಕಿಂತ ಪ್ರವಾದಿ ಮೊಹಮ್ಮದ್ (ಸಲ್) ರವರನ್ನು
ಹೆಚ್ಚಾಗಿ ಪ್ರೀತಿಸುವ ಹಲವು ಕೋಟಿ ಜನರು ಇನ್ನು ಬಾಳುತ್ತಿದ್ದಾರೆ.
ಲೋಕದ
ಜನರಿಂದ ಬಾರ್ಬರಿಕರು ಬಾಳುವ ಭೂಮಿಯೆಂದು ಅಲ್ಲಗಳೆಯಲ್ಪಟ್ಟ ಮರುಭೂಮಿಯಲ್ಲಿ ಹುಟ್ಟಿದ ಒಬ್ಬರಿಂದ
ಇಷ್ಟೊಂದು ಉನ್ನತ ಸ್ಥಿತಿಯನ್ನು ಪಡೆಯಲಾಗಿದ್ದು ಹೇಗೆ?
ಈ
ಪ್ರಶ್ನೆಗಾದ ಉತ್ತರವೇ ಈ ಪುಸ್ತಕ.
ಪ್ರವಾದಿ
ಮೊಹಮ್ಮದ್ (ಸಲ್) ರವರ ಜನನದಿಂದ ಮರಣದ ವರೆಗಾದ ಜೀವನ ಚರಿತ್ರೆಯ ಪುಸ್ತಕವಾಗಿ ಇದು ಇರ ಬಹುದೋ
ಎಂದು ಯಾರು ಗ್ರಹಿಸ ಬೇಡಿ.
* ಇದು ಚರಿತ್ರೆ ಪುಸ್ತಕವಲ್ಲ.
* ಪ್ರವಾದಿ ಮೊಹಮ್ಮದ್ (ಸಲ್) ರವರು ತೋರಿಸಿದ
ಆಧ್ಯಾತ್ಮಿಕ ಮಾರ್ಗವನ್ನು ವಿಶ್ಲೇಷಿಸುವ ಪುಸ್ತಕವು ಅಲ್ಲ.
* ಇಸ್ಲಾಂ ಮಾರ್ಗದ ಸಿಧ್ಧಾಂತದ ರೂಪುರೇಷೆಗಳನ್ನೋ, ಅದರ ಕಾನೂನು
ಕ್ರಮಗಳನ್ನೋ ವಿಶ್ಲೇಷಿಸುವುದಕ್ಕಾಗಿಯೂ ಈ ಪುಸ್ತಕ ಬರೆಯಲ್ಪಡಲಿಲ್ಲ.
* ಪ್ರವಾದಿ ಮೊಹಮ್ಮದ್ (ಸಲ್) ರವರು ನಡೆಸಿ ತೋರಿಸಿದ
ಪವಾಡಗಳನ್ನು ಪಟ್ಟಿ ಮಾಡಿ ಚಕಿತ ಗೊಳಿಸುವುದು ಇದರ ಉದ್ದೇಶವಲ್ಲ.
ಬದಲಿಗೆ
1400 ವರ್ಷಗಳ ಮುಂಚೆ ಲೋಕದಲ್ಲಿ ಹುಟ್ಟಿದ ಪ್ರವಾದಿ ಮೊಹಮ್ಮದ್ (ಸಲ್) ರವರು
ಇತರೆ ನಾಯಕರಿಂದ ಹೇಗೆ ಪ್ರತ್ಯೇಕತೆ ಹೊಂದಿದ್ದರು?
"ಪ್ರವಾದಿ ಮೊಹಮ್ಮದ್ (ಸಲ್) ತರಹ
ಒಂದು ಮನುಷ್ಯರನ್ನು ಲೋಕ ಕಂಡಿದ್ದಿಲ್ಲ" ಎಂದು ಮುಸ್ಲಿಮೇತರ ನಾಯಕರುಗಳು, ಚಿಂತಕರು, ಇತಿಹಾಸಶಿಕ್ಷಕರು
ಹಾಡಿ ಹೊಗಳುವುದು ಏಕೆ?
ನೂರು
ಕೋಟಿಗೂ ಹೆಚ್ಚಿನ ಜನರು ಅವರನ್ನು ಇಂದಿಗೂ ಹಾಗೆಯೇ ಹಿಂಬಾಲಿಸುವುದು ಏಕೆ? ಮುಂತಾದ
ಪ್ರಶ್ನೆಗಳಿಗಾದ ಉತ್ತರವೇ ಈ ಪುಸ್ತಕ.
ಮುಸ್ಲಿಮೇತರ
ಮಿತ್ರರು ಪ್ರವಾದಿ ವರ್ಯರ ಬಗ್ಗೆ ಅರಿತು ಕೊಳ್ಳಲು ಬಯಸಿದರೆ ಅವರ ವಿಶಿಷ್ಟತೆಯನ್ನು, ಅರ್ಹತೆಗಳನ್ನು
ನಿಶ್ಚಯವಾಗಿ ತಿಳಿದು ಕೊಳ್ಳಲು ಈ ಪುಸ್ತಕ ಸಹಾಯಕಾರಿ.
ಮುಸ್ಲಿಮರಿಗೂ
ಕೂಡ ಪ್ರವಾದಿ ಮೊಹಮ್ಮದ್ (ಸಲ್) ಕುರಿತು ಅರಿತು ಕೊಳ್ಳ ಬೇಕಾದ ಸುದ್ದಿಗಳು ಇದರಲ್ಲಿವೆ.
No comments:
Post a Comment