ಇಷ್ಟೊಂದು ಬಹುದೊಡ್ಡ ಅಧಿಕಾರವು,ಪ್ರಭಾವವು ಹೊಂದಿದ್ದ ಪ್ರವಾದಿ ಮೊಹಮ್ಮದ್ (ಸಲ್) ರವರು ಅಧಿಕಾರವನ್ನು, ಪ್ರಭಾವವನ್ನು ಬಳಸಿ ಸಂಪತ್ತನ್ನು ಕೂಡಿಟ್ಟರೇ?
ತಮ್ಮ ಬಾಳನ್ನು ಸಂಪತ್ಭರಿತವಾಗಿಸಿ ಕೊಂಡರೇ?
ತಮ್ಮ ಬಾಳನ್ನು ಸಂಪತ್ಭರಿತವಾಗಿಸಿ ಕೊಂಡರೇ?
ಆಸ್ತಿಗಳನ್ನು ಕೊಂಡು ಗುಡ್ಡೆಹಾಕಿದರೇ?
ರುಚಿಯಾದ ತಿಂಡಿಗಳೊಡನೆ, ಅರಮನೆ ವಾಸದೊಡನೆ ಐಷಾರಾಮಿ ಜೀವನ ಬಾಳಿದರೇ?
ಇದನ್ನು ಮೊದಲು ನಾವು ಸಂಶೋಧಿಸೋಣ.
ಏಕೆಂದರೆ ರಾಜಕೀಯದಲ್ಲೋ, ಆಧ್ಯಾತ್ಮದಲ್ಲೋ ನಾಯಕತ್ವವನ್ನು ಪಡೆದವರು ಆ ನಾಯಕತ್ವವನ್ನು ಬಳಸಿ ಹೀಗೆ ತಾನೇ ನಡೆವರು.
ಒಂದು ದೇಶದ ಪ್ರಧಾನಿಯಾಗಿ ಜವಾಬ್ದಾರಿ ಪಡೆದವರು ಕೆಲವು ತಿಂಗಳುಗಳು ಪ್ರಧಾನಿಯಾಗಿ ಪದವಿ ವಹಿಸಿ ನಂತರ ಪದವಿ ಕಳೆದುಕೊಂಡರು ಎಂದಿಟ್ಟು ಕೊಳ್ಳೋಣ. ಅವರು ಆ ಪದವಿಯನ್ನು ಪಡೆಯುವುದಕ್ಕೆ ಮುಂಚೆ ಎಷ್ಟು ಆಸ್ತಿ ಇಟ್ಟು ಕೊಂಡಿದ್ದರೋ, ಅವರ ಕುಟುಂಬದವರಿಗೆ ಎಷ್ಟು ಆಸ್ತಿಗಳು ಇದ್ದವೋ ಅದೇ ಮಟ್ಟಕ್ಕೆ ಈಗಲೂ ಇರುತ್ತದೆಯೇ? ನಿಶ್ಚಯವಾಗಿ ಇಲ್ಲ. ಅವರು ಪದವಿ ವಹಿಸಿದ ಕೆಲ ತಿಂಗಳುಗಳಲ್ಲಿಯೇ ಹಲವು ಪಟ್ಟು ಆಸ್ತಿಗಳನ್ನು ಗುಡ್ಡೆಹಾಕಿರುವರು.
ಈ ರೀತಿ ಆಸ್ತಿಗಳನ್ನು ಗುಡ್ಡೆ ಹಾಕುವುದಕ್ಕೆ ಪ್ರಧಾನಿ ಪದವಿ ಕೂಡ ಬೇಡ. ಪ್ರಧಾನಿಗಿಂತ ಅಧಿಕಾರ ಕಡಿಮೆ ಪಡೆದ ಮಂತ್ರಿಗಳು, ಹಿರಿಯ ಅಧಿಕಾರಿಗಳು ಕೂಡ ಐಷಾರಾಮಿ ಜೀವನ ಬಾಳಿ, ತಮ್ಮ ಹೆಸರಲ್ಲೂ, ತಮ್ಮ ಕುಟುಂಬದವರ ಹೆಸರಲ್ಲೂ ಆಸ್ತಿಗಳನ್ನು ಗುಡ್ಡೆ ಹಾಕಿ ಕೊಳ್ಳುವುದನ್ನು ನಾವು ಕಾಣುತ್ತೇವೆ.
ಇದಕ್ಕಿಂತ ಕಡಿಮೆ ಅಧಿಕಾರ ಪಡೆದ ವಿಧಾನ ಸಭಾ ಸದಸ್ಯರುಗಳು, ರಾಜ್ಯದ ರಾಜ್ಯಸಭಾ ಸದಸ್ಯರುಗಳು, ಅಧಿಕಾರಿಗಳು, ಅಂತರಾಡಳಿತ ಮಂಡಳಿಯ ನಾಯಕರುಗಳು,ಅದರ ಸದಸ್ಯರುಗಳು ಕೂಡ ಅಧಿಕಾರವನ್ನು ತಮ್ಮ ಸ್ವಾರ್ಥಕ್ಕೆ ಬಳಸಿ ಕೊಳ್ಳುವುದನ್ನು ನಾವು ಕಾಣುತ್ತೇವೆ.
ಇವರುಗಳು ಈ ಪದವಿಗಳನ್ನು ಪಡೆಯುವುದಕ್ಕೆ ಮುಂಚೆ ಯಾವ ಸ್ಥಿತಿಯಲ್ಲಿ ಇದ್ದರೋ, ಅದಕ್ಕಿಂತ ಹಲವು ಸಾವಿರ ಪಟ್ಟು ಶ್ರೀಮಂತರಾಗಿ ಬಿಡುವರು.
ಇದನ್ನು ಒಪ್ಪಿ ಕೊಳ್ಳುವುದಕ್ಕೆ ಇತಿಹಾಸದ ಅರಿವೋ, ಆಧಾರವೋ ಬೇಕಾಗಿಲ್ಲ. ನಮ್ಮ ಕಣ್ಣ ಮುಂದೆಯೇ ಬಾಳುತ್ತಿರುವ ಪ್ರತಿಯೊಂದು ನಾಯಕರು ಇದಕ್ಕೆ ಜೀವಂತ ನಿದರ್ಶನವಾಗಿದ್ದಾರೆ.
ಯಾವ ಒಬ್ಬ ನಾಯಕನ ಮೇಲೆ ಭ್ರಷ್ಟಾಚಾರದ ಆಪಾದನೆ ಹೊರಿಸಲ್ಪಟ್ಟರೂ "ನಾನು ಭ್ರಷ್ಟಾಚಾರ ಮಾಡಲಿಲ್ಲ" ಎಂದವರು ನಿರಾಕರಿಸುವುದಿಲ್ಲ. "ನೀನು ಭ್ರಷ್ಟಾಚಾರ ಮಾಡಲಿಲ್ಲವೇ?" ಎಂದು ಆಪಾದನೆ ಹೊರಿಸಿದವರನ್ನೇ ತಿರುಗಿಸಿ ಕೇಳುವುದೇ ಅವರ ಉತ್ತರವಾಗಿರುತ್ತದೆ.
ಪ್ರಶ್ನೆ ಕೇಳಲು ವಿರೋಧ ಪಕ್ಷಗಳು ಶಿಕ್ಷಿಸಲು ಕಾನೂನು, ನ್ಯಾಯಾಲಯಗಳು, ಹೊರಗೆಡವಲು ಸುದ್ದಿ ಮಾಧ್ಯಮಗಳು
ಇರುವ ಈ ಕಾಲದಲ್ಲಿಯೇ ಹೀಗೆಂದರೆ, ಇಂತಹ ಅಡಚಣೆಗಳು ಇಲ್ಲದ ಕಾಲದಲ್ಲಿ ಅಧಿಕಾರವನ್ನು ಪಡೆದವರು ಎಷ್ಟು ಆಟ ಆಡಿರಬಹುದು?
ಇದಕ್ಕೆ ಇತಿಹಾಸದಲ್ಲಿ ಹೇರಳವಾದ ಕುರುಹುಗಳಿವೆ. ಅವರು ಕಲಿಯಾಟವಾಡಿದ ಅರಮನೆಗಳು, ಕೋಟೆ, ಕೋಟೆಯ ಮೇಲಿನ ಕೈಪಿಡಿಗಳು, ಅಂತಹಪುರಗಳು, ಐಷಾರಾಮಿ ವಸ್ತುಗಳು ಇಂದಿಗೂ ಇದಕ್ಕೆ ಸಾಕ್ಷ್ಯವಾಗಿ ಉಳಿದಿವೆ.
ಕೂರುವ ಆಸನವನ್ನು ಕೂಡ ಬಂಗಾರದಲ್ಲಿ ರೂಪಿಸಿ ಕೊಂಡವರು, ಪ್ರೇಯಸಿಗಾಗಿ ಜನರ ತೆರಿಗೆ ಹಣದಲ್ಲಿ ಪ್ರೇಮ ಭವನ ಸೃಷ್ಟಿಸಿದವರು ಎಲ್ಲರೂ ಚರಿತ್ರೆಯಲ್ಲಿ ಜಾಗ ಪಡೆದಿರುವರು.
ಈ ತರಹದ ಪ್ರಶ್ನಾತೀತ ಕಾಲದಲ್ಲಿ ತಾನೇ ಪ್ರವಾದಿ ವರ್ಯರು ಆಡಳಿತ ನಡೆಸಿದರು. ಅವರ ಸುತ್ತಲೂ ಇದ್ದಂತಹ ಕೈಸರ್, ಕಿಸ್ರಾ, ಹೆರ್ಕುಲಿಸ್ನಂತಹ ದೊಡ್ಡ ರಾಜರುಗಳು, ಚಿಕ್ಕ ರಾಜರುಗಳು ಆಡಳಿತ ನಡೆಸಿದರು. ಅವರ ಹಾಗೆ ಪ್ರವಾದಿ ವರ್ಯರು ಆಡಳಿತ ನಡೆಸಿದ್ದರೆ ಯಾರು ಕೊರಗಿರಲಾರರು!
ನಾಯಕತ್ವ ಪದವಿಯನ್ನು ಪಡೆದ ಒಬ್ಬರು
* ತರಹ ತರಹ ತಿಂದು, ಉಟ್ಟರೇ?
* ಹಲವು ತೆರನಾದ ವಸ್ತುಗಳನ್ನು ಬಳಸಿದರೇ?
* ಐಷಾರಾಮಿ ವಸ್ತುಗಳನ್ನು ಗುಡ್ಡೆ ಹಾಕಿದ್ದರೇ?
* ತಲೆಯೆತ್ತಿ ನೋಡುವಷ್ಟು ಭವನಗಳನ್ನು ಕಟ್ಟಿದ್ದರೇ?
* ಊರನ್ನೇ ಕೊಂಡು ಕೊಂಡಿದ್ದರೇ?
* ತನ್ನ ವಾರಸ್ಸುಗಳಿಗೆ ಕೂಡಿಟ್ಟು ಹೊಗಿದ್ದರೇ?
ಎಂಬ ಪ್ರಶ್ನೆಗಳಿಗೆ ಇಲ್ಲ ಎಂದು ಉತ್ತರ ಹೇಳ ಬಹುದಾದರೆ ಮಾತ್ರ "ಅವರು ಪದವಿಯನ್ನು ಬಳಸಿ ವಸ್ತು ಸಂಗ್ರಹಿಸಲಿಲ್ಲ" ಎಂದು ಹೇಳಬಹುದು. ಮೇಲ್ಕಂಡ ಎಲ್ಲಾ ಪ್ರಶ್ನೆಗಳಿಗೂ ಪ್ರವಾದಿ ವರ್ಯರ ಮಟ್ಟಿಗೆ "ಇಲ್ಲ" ಎಂದೇ ಇತಿಹಾಸ ಉತ್ತರ ಹೇಳಿದೆ.